ಕಟ್ಟಿದರು ಮಂಡೆಯ

ರಚನೆ: ಹೆಳವನಕಟ್ಟೆ ಗಿರಿಯಮ್ಮ ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಕಟ್ಟಿದರು ಮಂಡೆಯ ಪಾವುಡೆಯಲಿ ಕೊಟ್ಟರೆ ಖಾರ ಚರ್ವಣೆಯ
ಇಟ್ಟರೆ ಅಷ್ಟದಿಕ್ಕಿಗೆ ಎಂಟು ರಕ್ಷೆಯ ಹರಸಿ ಆರತಿಯನೆತ್ತಿದರು

Read the rest of this entry »

ಸಂಚಿಕೆ-811

ಮೋಕ್ಷ ಪಡೆಯಬೇಕಾದರೆ ಜ್ಞಾನದಿಂದ ಮಾತ್ರ ಸಾಧ್ಯ ಎಂದು ತರುಣ ವಿದ್ವಾಂಸ ಉದಾಹರಣೆಗಳ ಸಮೇತ ನಿರೂಪಿಸುವನು. ನಂತರ ಗಿರಿಯಮ್ಮನಿಗೆ ಕ್ಲಿಷ್ಟವಾದ ಪ್ರಶ್ನೆಯೊಂದನ್ನು ಕೇಳುವನು

Read the rest of this entry »

ಸಂಚಿಕೆ-810

ದಿಡೀರನೆ ಮಗನಿಗೆ ತೀವ್ರ ಅಸ್ವಸ್ಥತೆ ಉಂಟಾಗಿ ಅವನು ಉಳಿಯುವ ಸಂಭವವಿಲ್ಲ ಎಂದು ಮನೆಯಿಂದ ಬಂದ ಆಳಿನಿಂದ ಗೊತ್ತಾದ ಪಠಾಣ ತೀವ್ರ ಗಾಭರಿ, ಆತಂಕದಲ್ಲಿ ಒದ್ದಾಡುವನು. ಇದಕ್ಕೆ ಪರಿಹಾರ ಗಿರಿಯಮ್ಮನ ಪ್ರಸಾದ ಎಂದು ಗಿರಿಯ ಮಹಿಮೆಯ ಕಥೆಯನ್ನು ಇನ್ನೊಬ್ಬ ಹೇಳಿದಾಗ ಪಠಾಣನಿಗೆ ಗೊಂದಲ.

Read the rest of this entry »

ಇಕೋ ಈತ ವೆಂಕಟೇಶನೊ

ರಚನೆ: ವಿಜಯವಿಠಲ ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಇಕೋ ಈತ ವೆಂಕಟೇಶನೊ . . ಭವದ
ಸಿಕ್ಕು ಬಿಡಿಸಿ ನೆನೆದವರಿಗೆ ಸಿಕ್ಕಿ ಮನದಿಂದಗಲದಿಪ್ಪಾ

Read the rest of this entry »

ಸಂಚಿಕೆ-809

ಸೀನಣ್ಣ ದುರ್ಗಾಳ ಕಷ್ಟ ಪರಿಹಾರಕ್ಕಾಗಿ ಗಿರಿಯಮ್ಮನನ್ನೆ ಕರೆದುಕೊಂಡು ಬಂದಾಗ ದುರ್ಗಾಗೆ ಅಚ್ಚರಿ. ಗಿರಿ ಸಮಾಧಾನ ಹೇಳಿ, ದೇವರ ಕುರಿತು ವ್ರತವೊಂದನ್ನು ಮಾಡು ಎಂದು ಸಲಹೆ ನೀಡುವಳು.

Read the rest of this entry »

ಸಂಚಿಕೆ-808

ನನ್ನ ಬಳಿ ವಿದ್ಯೆ ಕಲಿಯುವ ಅಪೇಕ್ಷೆ ಇದ್ದರೆ ಈ ರೀತಿ ಕಳ್ಳತನದಲ್ಲಿ ಬರುವ ಬದಲು ಶಿಷ್ಯಳಾಗಿ ಬಂದಿದ್ದರೆ ಕಲಿಸಿಕೊಡುತ್ತಿದ್ದೆ ಎಂದು ತರುಣ ವಿದ್ವಾಂಸ ಠೇಂಕಾರದಲ್ಲಿ ನುಡಿದಾಗ, ಶಿಷ್ಯ ಪಂಡಿತರು ಗಿರಿಯಮ್ಮ ಮಹಾ ಭಕ್ತೆ, ಅವಳು ಯಾರಿಂದಲೂ ವಿದ್ಯೆ ಕಲಿಯಬೇಕಾಗಿಲ್ಲ ಎಂದು ವಿರೋಧಿಸುವರು. ಮಾತಿಗೆ ಮಾತು ಬೆಳೆದು ಗಿರಿಯಮ್ಮ ಮತ್ತು ತರುಣ ವಿದ್ವಾಂಸರ ನಡುವೆ ಭಕ್ತಿ ಮತ್ತು ಜ್ಞಾನದ ಶ್ರೇಷ್ಟತೆಯ ಬಗ್ಗೆ ವಾದ ನಡೆಯಬೇಕು ಎನ್ನುವ ತೀರ್ಮಾನವಾಗುವುದು. ಅನಿವಾರ್ಯವಾಗಿ ವಾದ ಮಾಡಲು ಒಪ್ಪಿಕೊಳ್ಳುವ ಗಿರಿಯಮ್ಮ

Read the rest of this entry »

ನೆರೆದಿದ್ದ ಜನರೆಲ್ಲ

ರಚನೆ: ಹೆಳವನಕಟ್ಟೆ ಗಿರಿಯಮ್ಮ ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ನೆರೆದಿದ್ದ ಜನರೆಲ್ಲ ಹರಿದೋಡಿ ಹೋದರು ಮುನಿಗಳ ಕರೆದು ಹೇಳಿದರು
ಧರೆಯೊಳು ಶಿಶುವಲ್ಲ ಅದ್ಭುತವಾಗಿದೆ ಮರಳಿ ನೋಡುವರೆ ಅಂಜುವೆವು

Read the rest of this entry »

ಸಂಚಿಕೆ-807

ಸತ್ಯಭಾಮ ಗಂಟುಗಳನ್ನು ತೆಗೆದುಕೊಳ್ಳಲು ಹೊಂಚು ಹಾಕುತ್ತಿರುವಾಗ, ಚಿಕ್ಕರಸ ಕಪಾಟಿನಲ್ಲಿ ತನ್ನ ಆಭರಣ ಕಾಣಿಸುತ್ತಿಲ್ಲ ಎಂದು ಗೊತ್ತಾಗಿ ಭಾಗ್ಯಳನ್ನು ವಿಚಾರಿಸುವನು. ಅವಳು ತನಗೇನೂ ಗೊತ್ತಿಲ್ಲ ಎಂದಾಗ ಚಿಕ್ಕರಸ ಸತ್ಯಭಾಮಳ ಮೇಲೆ ಆರೋಪ ಹೊರಿಸುವನು. ಸತ್ಯಭಾಮಳಿಗೆ ಆತಂಕ. ಆದರೆ ಭಾಗ್ಯ ಸತ್ಯಭಾಮಳನ್ನು ವಹಿಸಿಕೊಂಡು ಮಾತಾಡುತ್ತ ತನ್ನ ಆಭರಣಗಳನ್ನು ತಂದುಕೊಟ್ಟವಳು, ನಿಮ್ಮ ಆಭರಣ ಏಕೆ ತೆಗೆದುಕೊಳ್ಳುವಳು ಎಂದು ಪ್ರಶ್ನಿಸಿದಾಗ ಚಿಕ್ಕರಸ ನಿರುತ್ತರ. ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಸತ್ಯಭಾಮಳಿಗೆ ತೀವ್ರ ಹರ್ಷ.

Read the rest of this entry »

ಸಂಚಿಕೆ-806

ವಿಧಿಯಿಲ್ಲದೆ ಶಿಕ್ಷೆ ಅನುಭವಿಸುತ್ತಿರುವ ದುರ್ಗಾಳ ಬಳಿ ಬಂದ ಸೀನಣ್ಣ ಮತ್ತೆ ಗಿರಿಯ ಸಹಾಯದಿಂದ ಶಿಕ್ಷೆ ರದ್ದು ಗೊಳಿಸುವುದಾಗಿ ಹೇಳಿದಾಗ ದುರ್ಗಾ ಬೇಡ ಎಂದು ಹೇಳುವಳು. ಚಕಿತಗೊಂಡ ಸೀನಣ್ಣನಿಗೆ ದುರ್ಗಾ ಸಮಾಧಾನ ಮಾಡುತ್ತ ನಾನು ಇದುವರೆಗೂ ಮಾಡಿದ ತಪ್ಪುಗಳಿಗೆ ಈ ಶಿಕ್ಷೆ ಅನುಭವಿಸುತ್ತಿದ್ದೇನೆ ಎಂದಾಗ ಸೀನಣ್ಣನಿಗೆ ತೀವ್ರ ಗೊಂದಲ

Read the rest of this entry »

ಗುರುದೈವದೊಲವೆನಗೆ ಬಲವೆ ಬಲವು

ರಚನೆ: ಮಹಿಪತಿದಾಸರು ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಗುರುದೈವದೊಲವೆನಗೆ ಬಲವೆ ಬಲವು
ಏರಿ ಬಿನಗು ದೈವದ ಬಲವು ಯಾತಕೆ ಹಲವು

ಗುರು ದಯದೊಲವೆನಗೆ ತಾಯಿ ತಂದೆಯ ಬಲವು
ಗುರು ಕರುಣದೊಲವೆನಗೆ ಬಾಹುಬಲವು
ಗುರು ಬೋಧದೊಲವೆನಗೆ ಬಂಧುಬಳಗದ ಬಲವು
ಗುರು ಧರ್ಮದೊಲವೆನಗೆ ಸರ್ವಬಲವು

ಗುರು ಪ್ರಭೆದೊಲವೆನಗೆ ಅನುಭವಾಶ್ರಯ ಬಲವು
ಗುರು ಜ್ಞಾನದೊಲವು ಘನ ದೈವ ಬಲವು
ಗುರುನಾಮದೊಲವೆನಗೆ ಪಕ್ಷವಾಗಿಹ್ಯ ಬಲವು
ತರಳ ಮಹಿಪತಿ ಸ್ವಾಮಿ ಬಲವೇ ಬಲವು

« Older entries Newer entries »