ಹೆಳವನಕಟ್ಟೆ ಗಿರಿಯಮ್ಮ – ಧಾರಾವಾಹಿಗೆ 100 ಕಂತುಗಳನ್ನು ಪೂರೈಸಿದ ಸಂಭ್ರಮ

10ನೇ ಜುಲೈ 2009ರಂದು, ವಾಗ್ದೇವಿ ಕ್ರಿಯೇಷನ್ ಗೆ ಸಂಭ್ರಮದ ದಿನ.  ಅಂದು ನಮ್ಮ ಸಂಸ್ಥೆ ನಿರ್ಮಿಸುತ್ತಿರುವ ಹೆಳವನಕಟ್ಟೆ ಗಿರಿಯಮ್ಮ ಧಾರಾವಾಹಿಯ 100ನೇ ಕಂತು ಈಟೀವಿ ಉಪಗ್ರಹವಾಹಿನಿಯಲ್ಲಿ ಪ್ರಸಾರಗೊಳ್ಳುವ ಸಂದರ್ಭ.

ನಮ್ಮ ಧಾರಾವಾಹಿಗೆ ಸಂಬಂಧಪಟ್ಟ ವಿವರಗಳನ್ನು ದಾಖಲಿಸುವ ಪ್ರಯತ್ನ, ಈ ಬ್ಲಾಗ್.

ಮುಖ್ಯವಾಗಿ ಧಾರಾವಾಹಿಯಲ್ಲಿ ಉಪಯೋಗಿಸಿರುವ ದಾಸರ ಕೀರ್ತನೆಗಳು, ಕತೆಯ ವಿವರಗಳು, ಧಾರಾವಾಹಿಯನ್ನು ನಿರ್ಮಿಸುವಲ್ಲಿ ಪಾಲುದಾರರಾದ ಕಲಾವಿದರು, ತಂತ್ರಜ್ಞರ ಕಿರು ಪರಿಚಯಗಳು ಮತ್ತು ಅಭಿಮಾನಿ ಪ್ರೇಕ್ಷಕರ ಅಭಿಪ್ರಾಯಗಳು, ಇವುಗಳನ್ನು ಒಂದು ಕಡೆ ದಾಖಲಿಸ ಬೇಕೆಂಬ ಹಂಬಲದ ಸಾಕಾರ ಈ ಬ್ಲಾಗ್.

Advertisements

ಸಂಚಿಕೆ-817

ರಾಜನ ಮುಂದೆ ಕುಳಿತ ತರುಣ ವಿದ್ವಾಂಸ, ಕೇವಲ ಅರ್ಧ ಉತ್ತರ ಗೊತ್ತಿದ್ದರೂ ದೇವರಲ್ಲಿ ಪ್ರಾರ್ಥನೆ ಮಾಡಿ, ಗಿರಿಯಮ್ಮನನ್ನು ನೆನೆಸಿಕೊಂಡು ಉತ್ತರ ಹೇಳಲು ಪ್ರಾರಂಭಿಸಿದಾಗ ಸಿಗದಿದ್ದ ಅರ್ಥವೂ ಬಾಯಿಂದ ಹೊರಟು, ಮೇಧಾವಿ ಶರಣಾಗುವನು. ರಾಜನಿಗೆ ಅತೀವ ಸಂತಸ. ತರುಣ ವಿದ್ವಾಂಸನಿಗೆ ಸನ್ಮಾನ ಮಾಡುವುದಾಗಿ ರಾಜ ಘೋಷಿಸುವನು.

Read the rest of this entry »

ಸಂಚಿಕೆ-816

ಗಿರಿಯಮ್ಮನ ಬಳಿ ಬಂದ ಪಂಡಿತರು, ವಿದ್ವಾಂಸರಿಗೆ ಉಂಟಾಗಿರುವ ಕಷ್ಟದ ಬಗ್ಗೆ ವಿವರಿಸುತ್ತ ಮೇಧಾವಿ ಕೇಳಿರುವ ಪ್ರಶ್ನೆಗೆ ಉತ್ತರ ಸಿಗದೆ ತರುಣ ವಿದ್ವಾಂಸ ಹತಾಷೆಯಾಗಿರುವರು ಎಂದಾಗ ಗಿರಿಗೆ ಚಿಂತೆ. ದೇವರಲ್ಲಿ ಪ್ರಾರ್ಥಿಸಿದ ಗಿರಿಯಮ್ಮ, ಆ ಪ್ರಶ್ನೆಗೆ ಉತ್ತರ ನಿರ್ದಿಷ್ಟವಾದ ಗ್ರಂಥದಲ್ಲಿ ಇರುವುದು, ಅದರಲ್ಲಿ ಹುಡುಕಲು ತರುಣ ವಿದ್ವಾಂಸನಿಗೆ ಹೇಳಿ ಎಂದು ಪಂಡಿತರಿಗೆ ಹೇಳುವಳು.

Read the rest of this entry »

ಸಾರಿಸಿ ರಂಗವಾಲೆಯನಿಕ್ಕಿ

ರಚನೆ: ಹೆಳವನಕಟ್ಟೆ ಗಿರಿಯಮ್ಮ ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಸಾರಿಸಿ ರಂಗವಾಲೆಯನಿಕ್ಕಿ ಮುನಿಪಗೆ ಪೂಜೆಗನುಕೂಲವ ಮಾಡುವಳು
ಈಗ ನಮ್ಮಯ್ಯ ಕಂಡರೆ ನಿನ್ನ ಬೈದಾನು ಹೋಗು ಮತ್ತೊಂದು ಕಾನನಕೆ

Read the rest of this entry »

ಶ್ರೀಶ ನೀನಹುದೋ

ರಚನೆ: ವಾದಿರಾಜರು ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಶ್ರೀಶ ನೀನಹುದೋ ಶೇಷಾಚಲವಾಸ ನೀನಹುದೊ
ಶೇಷಶಯನ ಸುರೇಶವಂದಿತ
ಶೇಷಜನರನು ಪಾಲಿಸಿ ಬಡ್ಡಿ
ಕಾಸು ಸೇರಿಸಿ ಗಂಟು ಕಟ್ಟುವ
ಕ್ಯಾಸಕ್ಕಿ ತಿಮ್ಮಪ್ಪ ನೀನೆ

Read the rest of this entry »

ಸಂಚಿಕೆ-815

ಹಲವಾರು ಗ್ರಂಥಗಳನ್ನು ಓದಿದ ತರುಣ ವಿದ್ವಾಂಸನಿಗೆ ಮೇಧಾವಿಯ ಪ್ರಶ್ನೆಗೆ ಉತ್ತರ ಸಿಗದೆ ತೀವ್ರ ಚಿಂತಾಕ್ರಾಂತನಾಗುವನು. ಸಿಟ್ಟಿನಲ್ಲಿ ತನ್ನ ಶಿಷ್ಯರಿಗೆ, ಶಿಷ್ಯ ಪಂಡಿತರಿಗೆ ನಾನಾ ರೀತಿಯಲ್ಲಿ ನಿಂದಿಸುವನು. ಎಲ್ಲರಿಗೂ ಗೊಂದಲ. ಗಿರಿಯಮ್ಮನೊಡನೆ ಚರ್ಚೆಯ ವಿಷಯ ನೆನಪಿಸಿದಾಗ, ನಾನೀಗ ರಾಜಕಾರ್ಯದಲ್ಲಿ ನಿರತನಾಗಿರುವುದರಿಂದ ಆ ಕ್ಷುಲ್ಲಕ ವಿಷಯ ಎಲ್ಲ ನೆನಪಿಸಬೇಡ ಎಂದು ತಿರಸ್ಕರಿಸುವನು.

Read the rest of this entry »

ಕಟ್ಟಿದ ಪರ್ಣಶಾಲೆಯಲಿ

ರಚನೆ: ಹೆಳವನಕಟ್ಟೆ ಗಿರಿಯಮ್ಮ ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಕಟ್ಟಿದ ಪರ್ಣಶಾಲೆಯಲಿ ಕಂದಗೆ ಕೃಷ್ಣಾಜಿನದ ತೊಟ್ಟಿಲನು
ಎತ್ತಿಕೊಂಡು ಹೋಗಿ ಮಲಗಿಸಿ ಹೆಸರನು ಇಟ್ಟನೆ ನಾಶಿಕೇತೆನುತ

Read the rest of this entry »

ಸಂಚಿಕೆ-814

ಉದ್ದಾಳಿಕ ನದಿಯ ಬಳಿ ಬಂದಾಗ ತೇಲಿಕೊಂಡು ಬರುತ್ತಿರುವ ತೊಟ್ಟಿಲಿನಲ್ಲಿ ಮಗು ಇರುವುದನ್ನು ಕಂಡು ಆಶ್ಚರ್ಯಗೊಂಡು ಮಗುವನ್ನು ಕಾಪಾಡುತ್ತಾನೆ. ಬ್ರಹ್ಮನ ಮಾತುಗಳನ್ನು ನೆನೆಸಿಕೊಳ್ಳುತ್ತಾನೆ.

Read the rest of this entry »

ಸಂಚಿಕೆ-813

ಅದೇ ಸಮಯಕ್ಕೆ ದಿಡೀರನೆ ಬರುವ ರಾಜದೂತ, ಮಹಾರಾಜರು ತರುಣ ವಿದ್ವಾಂಸನನ್ನು ಕೂಡಲೆ ಬರ ಹೇಳಿದ್ದಾರೆ ಎಂದು ಹೇಳಿದಾಗ, ವಿದ್ವಾಂಸ ಚರ್ಚೆಯನ್ನು ನಿಲ್ಲಿಸಬೇಕು ಎಂದು ಕೇಳಿಕೊಳ್ಳುವನು

Read the rest of this entry »

ಅರುಣನ ಉದಯವಾದ ಮುನ್ನ

ರಚನೆ: ಹೆಳವನಕಟ್ಟೆ ಗಿರಿಯಮ್ಮ ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಅರುಣನ ಉದಯವಾದ ಮುನ್ನ ಸತಿಯರು ತೆಗೆದು ಬಾಗಿಲ ನೋಡಿದರು
ತರಳ ಸಹಿತ ಚಂದ್ರಾವತಿಯಿಲ್ಲವೆನುತಲೆ ಮುನಿಗಳ ಕರೆದು ಹೇಳಿದರು

Read the rest of this entry »

ಸಂಚಿಕೆ-812

ಮುಖಂಡನ ಬಳಿ ಬಂದ ದುರ್ಗಾ, ತನ್ನ ಮನೆಯಲ್ಲಿದ್ದ ಉಡುಗೊರೆಗಳನ್ನು ಮಹಿಳೆ ಕದ್ದುಕೊಂಡು ಹೋಗಿದ್ದಾಳೆ ಎಂದು ದೂರು ನೀಡುವಳು

Read the rest of this entry »

« Older entries