ರಚನೆ: ಹೆಳವನಕಟ್ಟೆ ಗಿರಿಯಮ್ಮ ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್
ಸಾರಿಸಿ ರಂಗವಾಲೆಯನಿಕ್ಕಿ ಮುನಿಪಗೆ ಪೂಜೆಗನುಕೂಲವ ಮಾಡುವಳು
ಈಗ ನಮ್ಮಯ್ಯ ಕಂಡರೆ ನಿನ್ನ ಬೈದಾನು ಹೋಗು ಮತ್ತೊಂದು ಕಾನನಕೆ
ಮುಂದಕ್ಕೆ ಹೆಜ್ಜೆನಿಡುವರೆ ಕಾಲೇಳವು ನಿಂದು ನಿಂದೊಮ್ಮೆ ನೋಡುವಳು
ಬಂದಳೆ ಮತ್ತೊಂದು ವೃಕ್ಷದ ನೆಳಲಿಗೆ ನಿಂದಳೆ ನೀರ ತಡಿಯಲಿ
ಸ್ನಾನ ಜಪವ ಮಾಡಿ ಆ ಮುನೀಶ್ವರ ಬಂದ ಭಾನು ಮಧ್ಯಾಹ್ನಕಾಲದಲಿ
ಬಾಲನ ಕೈವಾಡಬಲ್ಲ ನೂತನವಾದ ನಾರಿಯ ಕೈವಾಡವೆಂದ
ಬೆಚ್ಚಿದ ಮುನಿಯ ಮಾತಿಗೆ ನಾಶಿಕೇತಾಗ ಮುಚ್ಚಿದನೆರಡು ಕಣ್ಗಳನು
ಇತ್ತ ಬಾರೈ ನಾಸಿಕೇತು ಅಂಜುವದ್ಯಾಕೆ ತಪ್ಪದೆ ಹೇಳೆನ್ನ ಕೂಡೆ