ಸಂಚಿಕೆ-816

ಗಿರಿಯಮ್ಮನ ಬಳಿ ಬಂದ ಪಂಡಿತರು, ವಿದ್ವಾಂಸರಿಗೆ ಉಂಟಾಗಿರುವ ಕಷ್ಟದ ಬಗ್ಗೆ ವಿವರಿಸುತ್ತ ಮೇಧಾವಿ ಕೇಳಿರುವ ಪ್ರಶ್ನೆಗೆ ಉತ್ತರ ಸಿಗದೆ ತರುಣ ವಿದ್ವಾಂಸ ಹತಾಷೆಯಾಗಿರುವರು ಎಂದಾಗ ಗಿರಿಗೆ ಚಿಂತೆ. ದೇವರಲ್ಲಿ ಪ್ರಾರ್ಥಿಸಿದ ಗಿರಿಯಮ್ಮ, ಆ ಪ್ರಶ್ನೆಗೆ ಉತ್ತರ ನಿರ್ದಿಷ್ಟವಾದ ಗ್ರಂಥದಲ್ಲಿ ಇರುವುದು, ಅದರಲ್ಲಿ ಹುಡುಕಲು ತರುಣ ವಿದ್ವಾಂಸನಿಗೆ ಹೇಳಿ ಎಂದು ಪಂಡಿತರಿಗೆ ಹೇಳುವಳು.

ಪಂಡಿತರು ತರುಣ ವಿದ್ವಾಂಸನ ಬಳಿ ಬಂದು, ನಿರ್ದಿಷ್ಟ ಗ್ರಂಥದಲ್ಲಿ ಮೇಧಾವಿಯ ಪ್ರಶ್ನೆಗೆ ಉತ್ತರ ಇರುವುದು ಎಂದು ಹೇಳಿದಾಗ ವಿದ್ವಾಂಸನಿಗೆ ಅಚ್ಚರಿ. ಇದನ್ನು ಹೇಳಿ ಕಳಿಸಿರುವುದು ಗಿರಿಯಮ್ಮ ಎಂದಾಗ ಇನ್ನಷ್ಟು ಅಚ್ಚರಿ. ಆದರೆ ಅಹಂ ಬಿಟ್ಟು ಕೊಡದೆ ಪಂಡಿತರ ಮಾತನ್ನು ನಿರ್ಲಕ್ಷೆ ಮಾಡುವ ನಾಟಕ ಆಡುವ ತರುಣ ವಿದ್ವಾಂಸ.

ದೇವಸ್ಥಾನದಲ್ಲಿ ಉದ್ದಾಳಿಕನ ಕಥೆಯ ಮುಂದಿನ ಭಾಗವನ್ನು ಗಿರಿಯ ಬಳಿ ಕೇಳುವ ಯುವತಿ, ಅವಳ ತಾಯಿ, ಇತರ ಮಹಿಳೆಯರು. ಗಿರಿ ಕಾವ್ಯದ ಭಾಗ “ಸಾರಿಸಿ ರಂಗವಾಲೆಯನಿಕ್ಕಿ” ಹಾಡಿ ನಂತರ ಕಥೆ ಹೇಳಲು ಪ್ರಾರಂಭಿಸುವಳು – ಕೀರ್ತನೆ

ರಾಜಕುಮಾರಿಯ ಬಳಿ ಬಂದ ಮಗ, ತನ್ನ ತಂದೆಯ ಬೇಡಿಕೆಯನ್ನು ಹೇಳಿದಾಗ ಕೋಪಗೊಂಡ ರಾಜಕುಮಾರಿ ನಿನ್ನ ತಂದೆ ನನಗೆ ಪರಪುರುಷ, ಅವನು ನನ್ನನ್ನು ಕರೆದಿರುವುದು ತಪ್ಪು, ನಾನು ಬರುವುದು ತಪ್ಪು ಎಂದು ನಿಂದಿಸಿ ಕಳಿಸುತ್ತಾಳೆ

ತರುಣ ವಿದ್ವಾಂಸ ಗಿರಿಯಮ್ಮ ಹೇಳಿದ ಗ್ರಂಥವನ್ನು ತೆಗೆದು ನೋಡಿದಾಗ ಅದರಲ್ಲಿ ಉತ್ತರ ಸಿಕ್ಕು ಅವರಿಗೆ ಗಿರಿಯಮ್ಮನಿಗೆ ಮೇಲೆ ಅಭಿಮಾನ, ಭಕ್ತಿ ಮೂಡುವುದು. ಆದರೆ ಗ್ರಂಥದ ಆ ಹಾಳೆ ಹರಿದುದರಿಂದ, ಅರ್ಧ ಉತ್ತರ ಮಾತ್ರ ಸಿಕ್ಕಾಗ ವಿದ್ವಾಂಸನಿಗೆ ಗೊಂದಲ.

ಪಂಡಿತರೊಡನೆ ಗಿರಿಯಮ್ಮನನ್ನು ಹುಡುಕಿಕೊಂಡು ಬರುವ ತರುಣ ವಿದ್ವಾಂಸ, ನಿನಗೆ ಆ ಗ್ರಂಥದಲ್ಲಿ ಉತ್ತರ ಇದೆ ಎಂದು ಹೇಗೆ ಗೊತ್ತಾಯಿತು, ಯಾವಾಗ ನೀನು ಆ ಗ್ರಂಥವನ್ನು ಓದಿದ್ದೆ ಎಂದು ಕೇಳುವನು. ಗಿರಿಯಮ್ಮ ದೇವರಲ್ಲಿ ಪ್ರಾರ್ಥನೆ ಮಾಡಿದಾಗ ಆ ವಿಚಾರ ಗೋಚರವಾಯಿತು ಎಂದು ಹೇಳುವಳು. ಈಗ ಗ್ರಂಥ ಹರಿದಿರುವುದರಿಂದ ಪೂರ್ತಿ ಉತ್ತರ ತಿಳಿದುಕೊಳ್ಳುವುದು ಹೇಗೆ ಎನ್ನುವ ತರುಣ ವಿದ್ವಾಂಸನ ಪ್ರಶ್ನೆಗೆ ದೇವರಲ್ಲಿ ಭಕ್ತಿಯನ್ನು ಇಟ್ಟು ಉತ್ತರ ಹೇಳುವ ಯತ್ನ ಮಾಡಿ, ಅವನೇ ನಿಮಗೆ ಪೂರ್ತಿ ಉತ್ತರ ಗೊತ್ತಾಗುವಂತೆ ಮಾಡುವನು ಎಂದು ಗಿರಿಯಮ್ಮ ಸಲಹೆ ನೀಡುವಳು. ನಂತರ ತರುಣ ವಿದ್ವಾಂಸ ಕೀರ್ತನೆ “ಶ್ರೀಶ ನೀನಹುದೋ” ಹಾಡುವ ಗಿರಿಯಮ್ಮನೊಡನೆ ದೇವರ ಪ್ರಾರ್ಥನೆ ಮಾಡುವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.